ನಲಿ-ಕಲಿ ಮಾಹಿತಿ.

   ಆತ್ಮೀಯರೇ,

      ನಮ್ಮ ತುಗ್ಗಲದಿನ್ನಿ ಸರ್ಕಾರಿ ಶಾಲೆಯಲ್ಲಿ 1-3 ಮಕ್ಕಳಿಗೆ ನಲಿ-ಕಲಿ ವಿಧಾನದ ಮೂಲಕ ಬೋಧನೆ ಮಾಡಲಾಗುತ್ತದೆ. ಶಿಕ್ಷಣ ನಿಂತ ನೀರಲ್ಲ ಅದು ಸದಾ ಪ್ರವಹಿಸುವ ವಾಹಿನಿಯಂತೆ. ಅದು ತನ್ನ ಒಡಲೊಳಗೆ ಅನೇಕ ತಂತ್ರಗಳು, ಯೋಜನೆಗಳು, ವಿಧಾನಗಳನ್ನು ಆವಿಷ್ಕರಿಸಿ ಅಳವಡಿಸಿಕೊಂಡು ಶಿಕ್ಷಣದ ಸಾರ್ವತ್ರೀಕರಣದ ಗುರಿಯತ್ತ ಸಾಗುತ್ತಿದೆ.

        ಗುಣಾತ್ಮಕ ಶಿಕ್ಷಣಕ್ಕಾಗಿ ನಡೆದಿರುವ ಹೊಸ ಪ್ರಯೋಗಗಳಲ್ಲಿ “ನಲಿ-ಕಲಿ” ಪದ್ಧತಿ ಒಂದು ವಿಶಿಷ್ಟ, ವಿನೂತನ ಯೋಜನೆಯಾಗಿದೆ. ಈ ಪದ್ಧತಿ ಶಿಶು ಕೇಂದ್ರಿತವಾಗಿ ಚಟುವಟಿಕೆಯ ಆಧಾರಿತವಾಗಿ ಮಗುವಿಗೆ ಶಾಲಾ ಶಿಕ್ಷಣದ ಜೊತೆಗೆ ಜೀವನಕ್ಕೆ ಬೇಕಾದ ವಿವಿಧ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿದೆ. ಈ ವಿಧಾನದಲ್ಲಿ ಮಗು ಸಂತಸದಾಯಕವಾಗಿ, ಸ್ವವೇಗದಿಂದ, ಸ್ವಕಲಿಕೆಯಿಂದ ಕಲಿಕಾ ಬೋಧನಾ ಪ್ರಕ್ರಿಯೆಯಲ್ಲಿ ತೊಡಗುತ್ತದೆ. 

No comments:

video lessons for S.S.L.C Students

S.S.L.C ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ವಿಷಯದ ಪಾಠಗಳ ವೀಡಿಯೋ ಪಾಠಗಳಿಗಾಗಿ ಈ ಲಿಂಕನ್ನು ಒತ್ತಿ