ನಮ್ಮ ಶಾಲಾ ಕಲಿಕೆ ಪ್ರಕ್ರಿಯೆ ಕುರಿತು


ಕರ್ನಾಟಕ ಸರಕಾರ

ಜಿಲ್ಲಾ ಪಂಚಾಯಿತಿ ರಾಯಚೂರು

ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು

ಸರಕಾರಿ ಹಿರಿಯ  ಪ್ರಾಥಮಿಕ ಶಾಲೆ ತುಗ್ಗಲದಿನ್ನಿ

ತಾ.ಮಾನ್ವಿ                                                                                                                                       ಜಿ.ರಾಯಚೂರು  

* ಶಾಲಾ  ಶೈಕ್ಷಣಿಕ ಪ್ರಕ್ರಿಯೆ &  ಸೌಲಭ್ಯಗಳು *

·       1.   ನುರಿತ ಅನುಭವಿ ಹಾಗೂ ತರಬೇತಿ ಪೆಡೆದ ಖಾಯಂ ಶಿಕ್ಷಕರಿಂದ ಪರಿಣಾಮಕಾರಿ ಬೋಧನೆ.

·       2.     ಆಕರ್ಷಕ ಹಾಗೂ ಸುಸಜ್ಜಿತವಾದ ಶಾಲಾ ಕಟ್ಟಡ ಹೊಂದಿದ್ದು ಮಕ್ಕಳ ವೈಯಕ್ತಿಕ ಕಾಳಜಿ ವಹಿಸಲಾಗುವುದು. ಮಕ್ಕಳ ಕಲಿಕೆಯ ಸಂತಸದಾಯಕ ಕಲಿಕೆಯೊಂದಿಗೆ ಮಕ್ಕಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಾಶಸ್ತ್ಯ ನೀಡಲಾಗುವುದು.

·     3.  ಸೆಲ್ಕೋ ಫೌಂಡೇಶನ್ ರವರ ಸಹಕಾರದಿಂದ ನಮ್ಮ ಶಾಲೆಯಲ್ಲಿ ಸ್ಮಾರ್ಟ ಕ್ಲಾಸ್ ಅಳವಡಿಸಿದ್ದು,

ಸ ಸುಮಾರು 9000 ಸಾವಿರ ಅನಿಮೇಷನ್ ವೀಡಿಯೋಗಳ ಮೂಲಕ ಇಂಗ್ಲೀಷ್.ಗಣಿತ,ವಿಜ್ಞಾನ,ಪರಿಸರ ಅಧ್ಯಯನ ಇತ್ಯಾದಿಗಳನ್ನು ಬೋಧಿಸಲಾಗುತ್ತಿದೆ.

·    4. ನಮ್ಮ ಶಾಲೆಯಲ್ಲಿ ಗಣಕಯಂತ್ರ ಸೌಲಭ್ಯ ಇದ್ದು, ಬಿಡುವಿನ ವೇಳೆಯಲ್ಲಿ ಕಂಪ್ಯೂಟರ್ ಕೂಡ ಕಲಿಸಲಾಗುತ್ತಿದೆ.

·    5.   ಉಚಿತ ಶೂ ಮತ್ತು ಸಾಕ್ಸ್ , ಸಮವಸ್ತ್ರ, ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ನೀಡಲಾಗುತ್ತದೆ.

·    6. ಎಲ್ಲಾ ಮಕ್ಕಳಿಗೂ ಅವರ ಬ್ಯಾಂಕ್ ಖಾತೆಗೆ ಶಿಷ್ಯ ವೇತನ ನೀಡಲಾಗುತ್ತಿದೆ. 

·   7. ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಎಲ್ಲಾ ಪೌಷ್ಟಿಕ ಹಾಲು ಹಾಗೂ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ.

·      8ಆಟದ ಮೈದಾನದ ಕೊರತೆ ಇದ್ದರೂ, ಗ್ರಾಮದವರ ಸಹಕಾರದಿಂದ ಮಕ್ಕಳು ಆಟೋಟ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಿದ್ದಾರೆ.

·   9.  ಹತ್ತು ಅಂಶಗಳ ಕಾರ್ಯಕ್ರಮದಲ್ಲಿ ಒಂದಾದ ವಾರಕೊಂದು ಪ್ರಯೋಗ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ, ಹಾಗೂ ವೈಜ್ಞಾನಿಕ ಮನೋಭಾವ ಮೂಡಿಸಲಾಗುತ್ತಿದೆ.

·    10. .ಮಕ್ಕಳ ಕಲಿಕಾ ಸ್ನೇಹಿ ವಿಧಾನವಾದ ನಲಿ-ಕಲಿ ವಿಧಾನದ ಮೂಲಕ 1-3 ನೇ ತರಗತಿ ಮಕ್ಕಳಿಗೆ ಬೋಧಿಸಲಾಗುತ್ತಿದೆ.

·       11.  ಸೃಜನಶೀಲ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯನ್ನು ಶಾಲೆಯು ಹೊಂದಿದ್ದು, ಶಾಲಾಭಿವೃದ್ಧಿಗೆ ಪೂರಕವಾಗಿ ಪ್ರೋತ್ಸಾಹ ಇದೆ.

·     12. ಗ್ರಂಥಾಲಯ ಸೌಲಭ್ಯವಿದ್ದು, ಮಕ್ಕಳ ವಾಚನಾಲಯದ ಮೂಲಕ ಮಕ್ಕಳಲ್ಲಿ ಒದುಗಾರಿಕೆ, ಸಾಹಿತ್ಯಾಭಿರುಚಿ, ಬರವಣಿಗೆ ಕೌಶಲ ಮೂಡಿಸಲಾಗುತ್ತಿದೆ.                                   

   

ಮುಖ್ಯ ಗುರುಗಳು & ಶಿಕ್ಷಕ ವೃಂದ

 ಅಧ್ಯಕ್ಷರು ಹಾಗೂ ಸರ್ವ ಸದಸ್ಯರು

ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸ.ಹಿ.ಪ್ರಾ.ಶಾಲೆ.ತುಗ್ಗಲದಿನ್ನಿ. ತಾಮಾನವಿ(ಮಸ್ಕಿ).

ಶಾಲಾ ಮಂತ್ರಿ ಮಂಡಲ ರಚನೆ ಸಂದರ್ಭದಲ್ಲಿ ಮುಖ್ಯಗುರುಗಳಿಂದ ಮಂತ್ರಿಗಳಿಗೆ ಪ್ರಮಾಣ ವಚನ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರಾಯಚೂರು ಇವರು ಪರಿಸರ ಮಿತ್ರ ಹಸಿರು ಶಾಲೆ ಪ್ರಶಸ್ತಿ ನೀಡುವ ಮಂಚೆ ನಮ್ಮ ಶಾಲಾವೀಕ್ಷಿಸಲು ಬಂದ ಸಂದರ್ಭ.




ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರಾಯಚೂರು ಇವರಿಂದ ಪಡೆದ ಹಸಿರ ಶಾಲೆ ಪ್ರಶಸ್ತಿ ಪತ್ರ. ಹಾಗೂ ನಿಮ್ಮ ಶಾಲಾ ತಂಡ ಪ್ರಶಸ್ತಿ ಸ್ವೀಕರಿಸಿದ ನೆನಪು

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ರಾಯಚೂರು ಇವರಿಂದ ನಮ್ಮ ಶಾಲೆಗೆ ತಾಲೂಕ ಮಟ್ಟದ  ಉತ್ತಮ ನೈರ್ಮಲ್ಯ ಶಾಲೆ ಪ್ರಶಸ್ತಿ ಪತ್ರ.
Inspire award MANAKA  ಕಾರ್ಯಕ್ರಮದಲ್ಲಿ ನಮ್ಮ ಮಕ್ಕಳು ಭಾಗವಹಿಸಿದ್ದರು.









No comments:

Post a Comment

video lessons for S.S.L.C Students

S.S.L.C ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ವಿಷಯದ ಪಾಠಗಳ ವೀಡಿಯೋ ಪಾಠಗಳಿಗಾಗಿ ಈ ಲಿಂಕನ್ನು ಒತ್ತಿ